SMR Gateway stands proudly as a harmonious blend of commercial and residential tranquility in the vibrant locality of Morgangate, Jeppu, Mangalore. On the residential front, the complex offers a haven of comfort and serenity, providing a range of well-appointed homes that cater to various lifestyles .This innovative complex redefines urban living by seamlessly integrating modern commercial spaces with luxurious residential offerings. This project consists of 2 & 3 bhk unit .This consists of only 30 limited flats and limited commercial space only on the ground floor. SMR Gateway is located on the prime area with easy connectivity to all essential needs. This also offers a good payment plan with the installments of 30 months. This has 2 Bhk area starting from 960 sqft to 1085 sqft and 3 Bhk from 1415 sqft to 1455 sqft and the commercial spaces starts from 265 sqft to 1890 sqft which is very much suitable for office space, clinics, showrooms or supermarkets. SMR Gateway not only elevates the skyline of Mangalore but also sets a new standard for integrated living where work and leisure coexist seamlessly.
SMR Corporation stands as a distinguished entity under the visionary leadership of Managing Director Mr.Rifath Ahmed, son of the esteemed S.M. Rasheed who has been a prominent builder since 3 decades. Mr.Ahmed with over 13 years of extensive expertise in constructing both commercial and residential marvels has steered the company towards a legacy of excellence. SMR Corp, synonymous with innovation, aspires to etch its name in the annals of the construction industry by consistently pushing the boundaries of creativity, technology, and unwavering commitment to delivering groundbreaking projects that redefine the standards of architectural brilliance.
ಮಂಗಳೂರು, ನ.26: ನಗರದ ಜೆಪ್ಪು ಮೋರ್ಗನ್ಸ್ ಗೇಟ್ ನಲ್ಲಿ ಎಸ್.ಎಂ.ಆರ್. ಕಾರ್ಪೊರೇಶನ್ ಹಾಗೂ ಬ್ಯಾರೀಸ್ ಅಸೋಸಿಯೇಟ್ಸ್ ಎಲ್.ಎಲ್.ಪಿ. ಜಂಟಿಯಾಗಿ ನಿರ್ಮಿಸಲಿರುವ 'ಗೇಟ್ ವೇ' ಕಮರ್ಶಿಯಲ್ ಕಮ್ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗೆ ರವಿವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ದುಆಗೈದರು.
ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘ಯಾವುದೇ ವಾಣಿಜ್ಯ ಮತ್ತು ವಸತಿ ಸಮುಚ್ಚಯ ಒಂದು ಕಡೆ ನಿರ್ಮಾಣವಾದರೆ ಅದರ ಪ್ರಯೋಜನ ಅಲ್ಲಿನ ಎಲ್ಲರಿಗೂ ಸಿಗುತ್ತದೆ. ಜೆಪ್ಪುವಿನ ಕೇಂದ್ರ ಭಾಗದಲ್ಲಿ 'ಗೇಟ್ ವೇ' ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಮಾಹಿತಿಪತ್ರ ಬಿಡುಗಡೆಗೊಳಿಸಿ ಯೆನೆಪೊಯ ವಿವಿಯ ಕುಲಪತಿ ಡಾ.ವೈ.ಅಬ್ದುಲ್ಲಾ ಕುಂಞಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಮಂಗಳೂರು ಶೀಘ್ರವಾಗಿ ಬೆಳೆಯುವ ನಗರವಾಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಾಣಿಜ್ಯ ಸಂಕೀರ್ಣಗಳು ಮತ್ತು ವಸತಿ ಸಮುಚ್ಚಯಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು, ಮಾರ್ಕೆಟ್, ವಿದ್ಯಾರ್ಥಿ ನಿಲಯ ಎಲ್ಲವೂ ಇರುವ ಜೆಪ್ಪು ಪ್ರದೇಶದಲ್ಲಿ ಎಸ್.ಎಂ.ರಶೀದ್ ಹಾಜಿ ನೇತೃತ್ವದಲ್ಲಿ ಗೇಟ್ವೇ ವಾಣಿಜ್ಯ ಸಮುಚ್ಚಯವನ್ನು ಕಾರ್ಯಗತಗೊಳಿಸಲಿದ್ದೇಶಿಸಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿಸ್ ಅಸೋಸಿಯೇಟ್ಸ್ ಎಲ್.ಎಲ್.ಪಿ. ಆಡಳಿತ ನಿರ್ದೇಶಕ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಎಸ್ಎಂಆರ್ ಕಾರ್ಪೊರೇಶನ್ ಮತ್ತು ಬ್ಯಾರೀಸ್ ಅಸೋಸಿಯೇಟ್ಸ್ ಎಲ್.ಎಲ್.ಪಿ. ವಾಣಿಜ್ಯ ಮತ್ತು ವಸತಿ ಸಮುಚ್ಚಯ ನಿರ್ಮಾಣಕ್ಕೆ ಮೊದಲ ಬಾರಿ ಜಂಟಿಯಾಗಿ ಯೋಜನೆ ಹಾಕಿಕೊಂಡಿದ್ದು, 36 ಸೆಂಟ್ಸ್ ಜಾಗದಲ್ಲಿ 'ಗೇಟ್ ವೇ' ವಾಣಿಜ್ಯ ಮತ್ತು ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ತಳ ಅಂತಸ್ತಿನಲ್ಲಿ ಕಾರು ಪಾರ್ಕಿಂಗ್, ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು, ಮೇಲಿನ 4 ಮಹಡಿಗಳಲ್ಲಿ 30 ಫ್ಲ್ಯಾಟ್ ಗಳು ಇರಲಿವೆ ಎಂದು ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಭಾನುಮತಿ ಪಿ.ಎಸ್., ಮಾಜಿ ಶಾಸಕ ಮೊಯ್ದಿನ್ ಬಾವಾ ಮಾತನಾಡಿ ಶುಭ ಹಾರೈಸಿದರು.
ಸಿಎ ಕೇಶವ್ ಬಳ್ಳಕುರಾಯ, ಆರ್ಕಿಟೆಕ್ ದಾಮೋದರ ಶೆಣೈ, ಇಂಜಿನಿಯರ್ ಆನಂದ್ ಭಟ್, ಎಸ್.ಎಂ.ಆರ್. ಕಾರ್ಪೊರೇಶನ್ ಆಡಳಿತ ಪಾಲುದಾರರಾದ ರಿಫಾತ್ ಅಹ್ಮದ್ ರಶೀದ್, ಡಾ.ರಾಹಿಸ್ ಅಬ್ಬಾಸ್ ರಶೀದ್, ಡಾ.ಶಿಹಾಬ್ ಹಸನ್, ಕಲ್ಲಿಕೋಟೆ -ಕಣ್ಣೂರು ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಅಬ್ದುಲ್ ರಹಿಮಾನ್, ಡಾ.ಹುಸೈನ್ ಕುಂಞಿ, ಸಾಲಿ ತಂಙಳ್, ಉದ್ಯಮಿಗಳಾದ ರಿಯಾಝ್ ಬಾವಾ, ಶೌಕತ್ ಸೌರಿ, ಮುಹಮ್ಮದ್ ಹಾರಿಸ್, ಆಸಿಫ್ ಸೂಫಿ ಖಾನ್, ಅಸ್ಗರ್ ಅಲಿ, ಎ.ಕೆ.ನಿಯಾಝ್, ಅಬ್ದುಲ್ ರಝಾಕ್ ಗೋಳ್ತಮಜಲು, ಎಸ್.ಎಂ.ಮುಸ್ತಫ, ಯಾಸಿರ್, ರವೂಫ್ ಸುಲ್ತಾನ್ ಗೋಲ್ಡ್, ಬದ್ರುದ್ದೀನ್ ಡೆಲ್ಟಾ, ಅಝೀಝ್ ಹಸನ್, ಹೈದರ್ ಪ್ರೆಸಿಡೆನ್ಸಿ ಬಿಲ್ಡರ್, ಝುಬೈರ್ ಅಂಬರ್, ವಿ. ಹರ್ಷದ್ ಹುಸೈನ್, ಜೋಹರ್ ಬಾವಾ, ವೇಣುಗೋಪಾಲ್, ಮೆಹಬೂಬ್, ಮುಹಮ್ಮದ್ ಅಲಿ ಉಚ್ಚಿಲ (ಅಬುಧಾಬಿ), ಮಾಜಿ ಮೇಯರ್ ಕೆ.ಅಶ್ರಫ್, ಶಾಹುಲ್ ಹಮೀದ್ ತಂಙಳ್, ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಮತ್ತು ಉಪಾಧ್ಯಕ್ಷ ಸಿ.ಮಹಮೂದ್, ಅಲ್ತಾಫ್ ಖತೀಬ್ ಮತ್ತಿತರರು ಉಪಸ್ಥಿತರಿದ್ದರು.
ಹಾಫಿಲ್ ಆಶಿಕ್ ಹಸನ್ ಕಿರಾಅತ್ ಪಠಿಸಿದರು. ಬಿ.ಎಂ.ಮಮ್ತಾಝ್ ಅಲಿ ವಂದಿಸಿದರು. ಅಬ್ದುಲ್ ಖಾದರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.